ಬೆಂಗಳೂರು: ಅಧಿಕಾರ ಸ್ವೀಕರಿಸುವ ಗಳಿಗೆಯಿಂದ ಹಿಡಿದು ಮುಖ್ಯಮಂತ್ರಿ ಎನಿಸಿಕೊಂಡ ಮೇಲೂ ಮುಳ್ಳಿನ ಹಾಸಿಗೆಯಲ್ಲಿರುವ ಸಿಎಂ ಯಡಿಯೂರಪ್ಪಗೆ ನಿದ್ರೆಯೇ ಇಲ್ಲದಂತಾಗಿದೆ.ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ರಾತ್ರಿ ನಿದ್ರೆಗೆಟ್ಟಿದ್ದ ಯಡಿಯೂರಪ್ಪ, ನಿನ್ನೆ ಕೂಡಾ ನಿದ್ರೆಯಿಲ್ಲದೇ ಅಹೋರಾತ್ರಿ ಸಭೆ, ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದರು. ಖಾಸಗಿ ಹೋಟೆಲ್ ನಲ್ಲಿ ಸಮಾಲೋಚನೆ ನಡೆಸಿ ಬೆಳಗಿನ ಜಾವವಷ್ಟೇ ಮನೆಗೆ ಮರಳಿದ್ದಾರೆ.ಇಂದು ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಡಿಜಿಪಿ ನೀಲಮಣಿ ರಾಜು ಸೇರಿದಂತೆ