ಬೆಂಗಳೂರು: ಈ ಬಾರಿಯ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕರಾವಳಿ, ಮಲೆನಾಡಿಗೆ ತೀರಾ ನಿರಾಶೆಯಾಗಿದೆ. ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಬಹುಪಾಲು ಹಾಸನ, ರಾಮನಗರ, ಹಳೆ ಮೈಸೂರು ಭಾಗಗಳಿಗೆ ಸಿಕ್ಕಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಕರಾವಳಿಯಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಬಿಜೆಪಿಯೇ ಗೆದ್ದಿತ್ತು. ಆ ಭಾಗಕ್ಕೆ ಯಾವುದೇ ಅನುದಾನ ಕೊಡದೇ ಸಿಎಂ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಬಜೆಟ್ ನಂತರ ಆಕ್ರೋಶ ವ್ಯಕ್ತಪಡಿಸಿದೆ.ಇತ್ತ