ನವದೆಹಲಿ(ಜು.21): ಕೇರಳ ಸರ್ಕಾರ ಜುಲೈ 23 ಮತ್ತು 24 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶಿಸಿದೆ. ದಿನಕ್ಕೆ 3 ಲಕ್ಷ ಕೊರೋನಾ ಟೆಸ್ಟ್ ಗುರಿಯಾಗಿಟ್ಟುಕೊಂಡು ಸಾಮೂಹಿಕ ಪರೀಕ್ಷಾ ಅಭಿಯಾನವನ್ನು ನಡೆಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.