ನವದೆಹಲಿ : ಉಕ್ರೇನ್ನಲ್ಲಿ ರಷ್ಯಾ ರಕ್ತದೋಕುಳಿ ನಡೆಸುತ್ತಿದೆ. ರಷ್ಯಾ ಸೈನಿಕರ ರಾಕ್ಷಸೀ ಕೃತ್ಯಕ್ಕೆ 25ಕ್ಕೂ ಹೆಚ್ಚು ದೇಶಗಳು ಕೆಂಡಾಮಂಡಲವಾಗಿವೆ.ವಿಶ್ವದೆಲ್ಲೆಡೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸ ಅಂದ್ರೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ನಡೆಯನ್ನು ರಷ್ಯಾ ಪ್ರಜೆಗಳೇ ತೀವ್ರವಾಗಿ ಖಂಡಿಸಿದ್ದಾರೆ.ನಮ್ಮದೇ ಸಂಸ್ಕೃತಿಯ, ನಮ್ಮದೇ ಭಾಷಿಕರ ದೇಶ ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಿ ಎಂದು ಸಾವಿರಾರು ರಷ್ಯನ್ನರು ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವ ಕೆಲಸವನ್ನು ರಷ್ಯಾ ಸರ್ಕಾರ ಮಾಡುತ್ತಿದೆ. ಮಹಿಳೆಯರು ಎನ್ನುವುದನ್ನು