ಮುಸ್ಲಿಂ ಮತ ಓಲೈಕೆ ಮಾಡಿಕೊಳ್ಳಲು ಹೋಗಿ ಬೀದರ್ ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಹೀಂ ಖಾನ್ ಯಡವಟ್ಟು ಮಾಡಿಕೊಂಡಿದ್ದಾರೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೆ ಯಡವಟ್ಟು ನಡೆದಿದೆ. ಮುಸ್ಲಿಂ ವೋಟ್ ಹೆಚ್ಚು ಇರುವುದ್ರಿಂದ ನನಗೆ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ನೀಡಿದ್ದಾರೆ. ಇಲ್ಲದಿದ್ದರೆ ಜೀವನದಲ್ಲೆ ನನಗೆ ಟಿಕೆಟ್ ಸಿಗುತ್ತಿರಲಿಲ್ಲ. ಕೇವಲ ಮುಸ್ಲಿಂ ಮತದಾರರಿಂದ ನನ್ನ ಗೆಲುವು ಸಾಧ್ಯ.