ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಇಷ್ಟು ದಿನ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆಯಾಗಿ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ ಇನ್ನು ಇದು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಹಲವು ಪ್ರಮಾದವೆಸಗಿ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದ ರಮ್ಯಾ ಅಧಿಕಾರಾವಧಿಗೆ ಹೈಕಮಾಂಡ್ ಕತ್ತರಿ ಹಾಕಿದೆ.ರಾಹುಲ್ ಗಾಂಧಿಯ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿ ಇನ್ನು ರಮ್ಯಾಗಿರಲ್ಲ. ಇದೆಲ್ಲಾ ಜವಾಬ್ಧಾರಿ ಈಗ ಮಾಜಿ ಕೇಂದ್ರ ಸಚಿವೆ