ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಎಂಎಲ್ ಎಗಳ ಜತೆಗೆ ಸಚಿವ ಸ್ಥಾನಕ್ಕಾಗಿ ಇದೀಗ ಜೆಡಿಎಸ್, ಕಾಂಗ್ರೆಸ್ ಎಂಎಲ್ ಸಿಗಳೂ ಧ್ವನಿ ಎತ್ತಿದ್ದಾರೆ.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ನಾವು ಎಂಎಲ್ ಎಗಳ ಜತೆ ರೆಸಾರ್ಟ್ ನಲ್ಲಿರಬೇಕಿತ್ತು. ಸರ್ಕಾರ ರಚಿಸಲು ನಮ್ಮ ಸಹಾಯ ತೆಗೆದುಕೊಂಡಿರಿ. ಈಗ ಅಧಿಕಾರ ಸಿಕ್ಕಿದ ಮೇಲೆ ನಾವು ಬೇಡವೇ ಎಂದು ಜೆಡಿಎಸ್ ಎಂಎಲ್ ಸಿಗಳು ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.ಇನ್ನೊಂದೆಡೆ ದೆಹಲಿಗೆ ತೆರಳಿರುವ ಕಾಂಗ್ರೆಸ್ ಎಂಎಲ್