ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಅಸಮಾಧಾನ ಶುರುವಾಗಿದೆ ಎನ್ನಲಾಗಿದೆ. ತಮ್ಮನ್ನು ಕೇಳದೇ ಜೆಡಿಎಸ್ ನಾಯಕರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ನ ವೀರಪ್ಪ ಮೊಯಿಲಿಯಂತಹ ಹಿರಿಯ ನಾಯಕರೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್ ನ್ನು ಸಂಪರ್ಕಿಸದೇ ಜೆಡಿಎಸ್ ಸಚಿವರು ತಮಗಿಷ್ಟ ಬಂದ ಹಾಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಎಷ್ಟು ಸರಿ ಎಂದು ಈ