ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಸರ್ಕಾರದ ಬಹುತೇಕ ಸಚಿವರಿಗೆ ಸೋಲಿನ ಶಾಕ್ ನೀಡಿದ್ದಾರೆ.ಅದರಲ್ಲೂ ಕೆಲವು ಪ್ರಮುಖ ಸಚಿವರೇ ಸೋತಿರುವುದು ದೊಡ್ಡ ಶಾಕ್ ನೀಡಲಿದೆ. ಪ್ರಮುಖವಾಗಿ ಬಂಟ್ವಾಳದಲ್ಲಿ ನನಗೆ ಮುಸ್ಲಿಮರ ಓಟು ಸಾಕು ಎನ್ನುತ್ತಿದ್ದ ಸಚಿವ ಬಿ ರಮಾನಾಥ ರೈ ಸೋಲು, ಹಿಂದುಳಿದ ವರ್ಗದ ಪ್ರಮುಖ ನಾಯಕ ಎಂದೇ ಗುರುತಿಸಿಕೊಂಡಿದ್ದ ಸಚಿವ ಆಂಜನೇಯ ಸೋಲು, ಬಿಜೆಪಿ ಕಾರ್ಯಕರ್ತರೊಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಕ್ಕೊಳಗಾಗಿದ್ದ ಸಚಿವ ವಿನಯ್ ಕುಲಕರ್ಣಿಗೆ ಸೋಲಾಗಿದೆ.