ಬೆಂಗಳೂರು: ವಿಶ್ವಾಸ ಮತ ಯಾಚನೆ ಸಂದರ್ಭ ಬಿಜೆಪಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಗೆ ಬಂಪರ್ ಆಫರ್ ನೀಡುವ ಬಿಜೆಪಿ ನಾಯಕರ ಮಾತುಕತೆಯ ಅಡಿಯೋ ಒಂದನ್ನು ಕಾಂಗ್ರೆಸ್ ಎಂಎಲ್ ಸಿ ವಿಎಸ್ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ.ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೇ, ಉಗ್ರಪ್ಪ ಬಿಜೆಪಿ ನಾಯಕರ ವಿರುದ್ಧ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಶಿವರಾಮ್ ಹೆಬ್ಬಾರ್ ಪತ್ನಿಗೆ ಕರೆ ಮಾಡಿ ಬಿಜೆ ಪುಟ್ಟಸ್ವಾಮಿ ಮತ್ತು ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾತನಾಡಿದ್ದಾರೆಂಬ