ಅಪ್ ಸೆಟ್ ಆಗಿರುವ ರಮ್ಯಾ ಸಮಾಧಾನ ಮಾಡಲು ಕಾಂಗ್ರೆಸ್ ಬಿಗ್ ಆಫರ್?!

ನವದೆಹಲಿ| Krishnaveni K| Last Modified ಗುರುವಾರ, 4 ಅಕ್ಟೋಬರ್ 2018 (08:35 IST)
ನವದೆಹಲಿ: ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಅಧ್ಯಕ್ಷೆಯಾಗಿರುವ ನಟಿ ರಮ್ಯಾ ಇದೀಗ ಪಕ್ಷದಲ್ಲಿ ತಮಗೆ ಬೆಲೆ ನೀಡದೇ ಇರುವುದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.


ಇದೇ ಕಾರಣಕ್ಕೆ ರಮ್ಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯಿತ್ತು. ಆದರೆ ಅದು ಸುಳ್ಳು ಎಂದು ಸ್ವತಃ ರಮ್ಯಾ ಸ್ಪಷ್ಟನೆ ನೀಡಿದರು. ಹಾಗಿದ್ದರೂ ಅವರು ಪಕ್ಷದಲ್ಲಿ ತಮಗೆ ನೀಡಿದ ಜವಾಬ್ಧಾರಿಗಳನ್ನು ಕಿತ್ತುಕೊಂಡಿದ್ದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.


ಮೂಲಗಳ ಪ್ರಕಾರ ರಾಹುಲ್ ಗಾಂಧಿ ಟ್ವಿಟರ್ ಖಾತೆಯ ನಿರ್ವಹಣೆ ಜವಾಬ್ಧಾರಿಯನ್ನು ನಿಖಿಲ್ ಆಳ್ವಾಗೆ ನೀಡಿರುವುದಕ್ಕೆ ರಮ್ಯಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಇದೇ ಅಸಮಾಧಾನದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹಬ್ಬಿತ್ತು.


ಅದೇನೇ ಇರಲಿ, ಇದರ ನಡುವೆಯೇ ರಮ್ಯಾಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗುತ್ತದೆ ಎಂದು ಹೊಸದಾಗಿ ಸುದ್ದಿ ಹಬ್ಬಿದೆ. ಈ
ಮೂಲ ಅಸಮಾಧಾನಗೊಂಡಿರುವ ರಮ್ಯಾರಿಗೆ ಟಿಕೆಟ್ ನೀಡಿ ಸಮಾಧಾನಿಸುವ ಯತ್ನ ನಡೆದಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :