ಸರಿಸುಮಾರು ಶತಮಾನದಿಂದ ಇಡೀ ವಿಶ್ವವನ್ನು ಅದರಲ್ಲೂ ಪ್ರಮುಖವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳನ್ನು ನಿರಂತರವಾಗಿ ಕಾಡುತ್ತಾ ಬಂದಿರುವ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸುವ ಪ್ರಕ್ರಿಯೆಯಲ್ಲಿ ವೈದ್ಯಕೀಯ ಕ್ಷೇತ್ರ ಕೊನೆಗೂ ಯಶಸ್ಸು ಕಂಡಿದೆ. ಸಂಶೋಧಕರ ಪಾಲಿಗೆ ಕಠಿನ ಸವಾಲಾಗಿ ಪರಿಣಮಿಸಿದ್ದ ಮಲೇರಿಯಾ ಕಾಯಿಲೆಗೆ ಲಸಿಕೆಯೊಂದನ್ನು ಸಂಶೋಧಿಸಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ. ಎಲ್ಲ ವಯೋಮಾನದವರನ್ನು ಮಲೇರಿಯಾ ಕಾಯಿಲೆ ಕಾಡುತ್ತದೆಯಾದರೂ ಮಕ್ಕಳ ಪಾಲಿಗೆ ಇದು ಯಮದೂತನೇ ಸರಿ. ಬಡತನ