ಬೆಂಗಳೂರು : ಮೊಟ್ಟೆ ಬೆಲೆ ಏರಿಕೆಯತ್ತ ಮುಖಮಾಡಿದ್ದು, ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದೆ.ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ.2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.58 ರೂಪಾಯಿ ಇತ್ತು.