ಬೆಂಗಳೂರು, ಸೆ.29 : ನಗರದ ಹೊರವಲಯದಲ್ಲಿರುವ ಹಾಸ್ಟೆಲ್ವೊಂದರಲ್ಲಿ ಕೊರೊನಾ ಸ್ಫೋಟಗೊಂಡಿದೆ. ಹಾಸ್ಟೆಲ್ನಲ್ಲಿದ್ದ 335 ವಿದ್ಯಾರ್ಥಿನಿಯರ ಪೈಕಿ 54 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರ ಸಮೀಪದಲ್ಲಿರುವ ಶ್ರೀ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯ ಹಾಸ್ಟೆಲ್ನಲ್ಲಿ ತಂಗಿದ್ದ 54 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಟೆಲ್ನಲ್ಲಿ ಮೂರು ಬ್ಲಾಕ್ಗಳಿದ್ದು, ಒಂದು ಬ್ಲಾಕ್ನಲ್ಲಿ ತಂಗಿದ್ದ ತಮಿಳುನಾಡು ಹಾಗೂ ಸ್ಥಳೀಯ