ಬೆಂಗಳೂರು : ಕೊರೊನಾ 4ನೇ ಅಲೆ ಭೀತಿಯ ಬೆನ್ನಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.ಇಂದು ಒಟ್ಟು 126 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಿನ್ನೆಗಿಂತ 41 ಪ್ರಕರಣಗಳು ಹೆಚ್ಚಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಇಂದು ಯಾವುದೇ ಮರಣ ಪ್ರಕರಣಗಳು ದಾಖಲಾಗಿಲ್ಲ.ಬೆಂಗಳೂರು ನಗರದಲ್ಲಿ ಇಂದು 114 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 1.16% ಮತ್ತು ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,713 ಇದೆ. ರಾಜ್ಯದಲ್ಲಿ