ಬೆಂಗಳೂರು : ಅಬ್ಬರಿಸಿ ಕೊಂಚ ಸುಮ್ಮನಾಗಿದ್ದ ಮಾಹಾಮಾರಿ ಕೊರೊನಾ ಈಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಅದರಲ್ಲೂ ಆನೇಕಲ್ ಸುತ್ತಮುತ್ತ ಕೊರೊನಾ ಹೆಚ್ಚಾಗುತ್ತಿದ್ದು ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ. ಆನೇಕಲ್ ಬಳಿಯ ಮರಸೂರಿನ ನರ್ಸಿಂಗ್ ಕಾಲೇಜು ಮತ್ತು ದೊಮ್ಮಸಂದ್ರದ ಟಿಐಎಸ್ಬಿಯಲ್ಲಿ ಪತ್ತೆಯಾದ ಕೇಸ್ಗಳು ಅಧಿಕಾರಿಗಳಿಗೆ ತಲೆನೋವು ತಂದಿದೆ. ಆನೇಕಲ್ ಬಳಿಯ ಮರಸೂರಿನ ಸ್ಫೂರ್ತಿ ನರ್ಸಿಂಗ್ ಕಾಲೇಜಿನಲ್ಲಿ 17 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೂ ದೊಮ್ಮಸಂದ್ರದ ಟಿಐಎಸ್ಬಿಯಲ್ಲಿ