ಹೊಸ ದಿಲ್ಲಿ: ದೇಶಾದ್ಯಂತ ಮಿತಿ ಮೀರಿದ ವಾಯು ಮಾಲಿನ್ಯದಿಂದಾಗಿ ಮುಂದಿನ ದಿನಗಳಲ್ಲಿ ಕೋವಿಡ್ - 19 ಸೋಂಕಿತರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಚಳಿಗಾಲ, ವಿಷಗಾಳಿ ಮತ್ತು ಕೊರೊನಾ ಬಾಧೆಗಳಿಂದ ದೇಶಾದ್ಯಂತ ಶ್ವಾಸಕೋಶ ಸಂಬಂಧಿತ ತೀವ್ರತರ ಸಮಸ್ಯೆಗಳು, ಅಸ್ತಮಾ ಬಾಧಿತರ ಉಸಿರಾಟಕ್ಕೆ ತೊಂದರೆಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಆತಂಕವನ್ನು ಏಮ್ಸ್ ನಿರ್ದೇಶಕ ಡಾ. ರಣ ದೀಪ್ ಗುಲೇರಿಯಾ ಅವರು ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,