ಕೊರೊನಾ ವೈರಸ್ ತವರು ಚೀನಾ. ಮಾರಣಾಂತಿಕ ವೈರಸ್ ಮೂಲಕ ವಿಶ್ವಾದ್ಯಂತ ಸಾವು-ನೋವು, ಆರ್ಥಿಕ ಕುಸಿತಕ್ಕೆ ಈ ಡ್ರ್ಯಾಗನ್ ರಾಷ್ಟ್ರವೇ ಕಾರಣ. ಆದರೆ ಆ ಜವಾಬ್ದಾರಿಯನ್ನೂ ಈವರೆಗೂ ಚೀನಾ ಹೊತ್ತುಕೊಂಡಿಲ್ಲ.ಕೋವಿಡ್-19, ಡೆಲ್ಟಾ, ಓಮಿಕ್ರಾನ್ ಹೀಗೆ ಮೂರು ಅಲೆಗಳ ಮೂಲಕ ಇಡೀ ಜಗತ್ತನ್ನು ವೈರಸ್ ಹಿಂಡಿ ಹಿಪ್ಪೆ ಮಾಡಿತ್ತು. ಅದಾದ ಬಳಿಕ ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುವ ಹೊತ್ತಿನಲ್ಲೇ ಈಗ ಮತ್ತೆ 4ನೇ ಅಲೆಯ ಭೀತಿ ಶುರುವಾಗಿದೆ.ಹೌದು, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಜೋರಾಗಿದೆ.