ನವದೆಹಲಿ : NEET-PG 2021ರ ಕೋಟಾದಲ್ಲಿ ಖಾಲಿ ಇರುವ ವೈದ್ಯಕೀಯ ಸೀಟುಗಳಿಗೆ ಹೊಸ ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈಗ ಅವಕಾಶ ನೀಡುವುದು ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.40,000 ಸ್ನಾತಕೋತ್ತರ ಸೀಟುಗಳು ಪೈಕಿ NEET-PG 2021ರ ಕೋಟಾದಲ್ಲಿ 1,456 ಸೀಟಗಳು ಖಾಲಿ ಉಳಿದಿದ್ದು ಇವುಗಳ ಭರ್ತಿಗೆ ವಿಶೇಷ ಕೌನ್ಸೆಲಿಂಗ್