ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ ಮಂಗಳವಾರ ರಾತ್ರಿಯಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.ಇದು ಹೋಟೆಲ್, ವ್ಯಾಪಾರ, ಸಾರಿಗೆ ಸೇರಿದಂತೆ ಹಲವು ವಲಯಗಳ ಮೇಲೆ ಭಾರಿ ಹೊಡೆತ ನೀಡಲಿದ್ದು, ಹೀಗಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ನಿರ್ಬಂಧಗಳ ಸಡಿಲಿಕೆಗೆ ಒತ್ತಡ ಹೆಚ್ಚಾಗಿದೆ.ಎರಡು ಬಾರಿಯ ಲಾಕ್ಡೌನ್, ಹಲವು ಬಾರಿ ಎದುರಾದ ನೈಟ್ ಕರ್ಫ್ಯೂಗಳಿಂದ ಈಗಾಗಲೇ ಭಾರಿ ಸಂಕಷ್ಟದಲ್ಲಿರುವ ಆತಿಥ್ಯ, ಉದ್ಯಮ ಕ್ಷೇತ್ರಗಳು ಒಂದಿಷ್ಟು ಚೇತರಿಕೆ