ನವದೆಹಲಿ : ದೇಶದಾದ್ಯಂತ 24 ಗಂಟೆಗಳ ಅಂತರದಲ್ಲಿ ಕೋವಿಡ್-19 ದೃಢಪಟ್ಟ 14,623 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,41,08,996ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1,78,098ಕ್ಕೆ ಇಳಿಕೆಯಾಗಿದೆ, ಇದು ಕಳೆದ 229 ದಿನಗಳಲ್ಲೇ ದಾಖಲಾಗಿರುವ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ. ಇದೇ ಅವಧಿಯಲ್ಲಿ ಕೋವಿಡ್ ಕಾರಣಗಳಿಂದಾಗಿ 197 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,52,651 ತಲುಪಿದೆ. ಕಳೆದ 26 ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ