ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು , ದೇಶದಲ್ಲಿ ಖಾದ್ಯ ತೈಲಗಳ ಬೆಲೆ ವರ್ಷಾಂತ್ಯಕ್ಕೆ ಇಳಿಕೆಯಾಗಲಿವೆ ಎಂದು ಕೇಂದ್ರ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ . ಹಾಲಿ ಮಾನ್ಸೂನ್ನಲ್ಲಿ ಬೆಳೆಯುವ ಎಣ್ಣೆ ಕಾಳುಗಳು ವರ್ಷಾಂತ್ಯದ ಹೊತ್ತಿಗೆ ಮಾರುಕಟ್ಟೆಗೆ ಬರಲಿದ್ದು, ಜಾಗತಿಕ ಮಟ್ಟದಲ್ಲೂ ಖಾದ್ಯ ತೈಲದ ಬೆಲೆ ಕಡಿಮೆಯಾಗುವುದರಿಂದ ದೇಶದಲ್ಲಿ ಲಭ್ಯವಾಗುವ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತದೆ. ಆದರೆ, ಬೆಲೆಗಳು ಏಕಾಏಕಿ ಇಳಿಮುಖವಾಗುವುದಿಲ್ಲ.