ಒಂದೂವರೆ ವರ್ಷದ ನಂತರ, ಚಿಲ್ಲರೆ ಹಣದುಬ್ಬರವು ಸತತ ಎರಡು ತಿಂಗಳಲ್ಲಿ 6% ಕ್ಕಿಂತ ಹೆಚ್ಚು ಹೆಚ್ಚಿರುವ ಕಾರಣ, ಸರ್ಕಾರವು ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಡಿಆರ್ ಅನ್ನು ಹೆಚ್ಚಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚುತ್ತಿರುವ ಆಹಾರ ಮತ್ತು ತೈಲ ಬೆಲೆಗಳನ್ನು ನಿಭಾಯಿಸಲು ಲಕ್ಷಾಂತರ ಫಲಾನುಭವಿಗಳಿಗೆ ಈ ಹೆಚ್ಚಳವು ಸಹಾಯವಾಗುವುದು ಎಂದು ಹೇಳಿದರೂ ತಪ್ಪಾಗುವುದಿಲ್ಲ.