ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಕೊಡಗು ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ನಡೆದುಕೊಂಡ ರೀತಿಗೆ ಡಿಸಿಎಂ ಜಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜತೆ ಗರಂ ಆಗಿ ನಡೆದುಕೊಂಡ ಸಚಿವೆ ನಿರ್ಮಲಾ, ಸಚಿವರ ಜತೆ ಸಿಡಿಮಿಡಿಗೊಳ್ಳುತ್ತಲೇ ಮಾತನಾಡಿದ್ದರು. ಅಷ್ಟೇ ಅಲ್ಲದೆ, ಸಭೆಯಲ್ಲೂ ಸರಿಯಾಗಿ ಸಮಸ್ಯೆ ಆಲಿಸಿಕೊಳ್ಳಲಿಲ್ಲ ಎಂಬ ಆರೋಪಗಳ ಬಗ್ಗೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಅವರು ನಮ್ಮ ರಾಜ್ಯದಿಂದಲೇ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದವರು. ಅವರಿಗೆ ಹೇಗೆ