ಕೀವ್ : ಸೋಮವಾರ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಉಕ್ರೇನ್ ತಕ್ಷಣದ ಕದನ ವಿರಾಮ ಘೋಷಿಸುವಂತೆ ರಷ್ಯಾವನ್ನು ಒತ್ತಾಯಿಸಿತು.ಕೀವ್ನ ಸಮಾಲೋಚಕರು ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ಒತ್ತಾಯಿಸುತ್ತಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.ಎರಡೂ ದೇಶಗಳು ಮಾತುಕತೆಗಳನ್ನು ಸೋಮವಾರ ವಿರಾಮಗೊಳಿಸಿವೆ. ಮಂಗಳವಾರ ಮಾತುಕತೆ ಮುಂದುವರಿಯಲಿದೆ ಎಂದು ಉಕ್ರೇನ್ ಸಮಾಲೋಚಕರೊಬ್ಬರು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.ಯುದ್ಧ ಹೀಗೆ ಮುಂದುವರಿದರೆ ಉಕ್ರೇನ್ನ ಆರ್ಥಿಕತೆಯಲ್ಲಿ ಶೇ. 35 ರಷ್ಟು ಕುಸಿತ ಉಂಟಾಗಲಿದೆ. ಆಹಾರ ಭದ್ರತೆಗೂ ಹೊಡೆತ ಬೀಳಲಿದೆ