ಇಂದಿನಿಂದ 6 ನೆಯ ತರಗತಿಯಿಂದ 10ನೆ ತರಗತಿಯ ಶಾಲಾ ಮಕ್ಕಳು ರಾಜ್ಯಾದ್ಯಂತ ಇಂದಿನಿಂದ ಶಾಲೆಗಳಿಗೆ ಪೂರ್ವಾವಧಿಗೆ ಹಾಜರಾಗಲಿದ್ದಾರೆ. ಈ ಮಧ್ಯೆ, 1ರಿಂದ 5ನೇ ತರಗತಿ ಶಾಲೆ ಆರಂಭ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜತೆ ಸಿಎಂ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಶಾಲೆ ಆರಂಭ ದಿನಾಂಕ ಹೊರಬೀಳುವ ಸಾಧ್ಯತೆಯಿದೆ.