ಜಿನೆವಾ : ಕೋವಿಡ್-19 ರೂಪಾಂತರಿಗಳಿಂದ ಕಂಗೆಟ್ಟಿರುವ ವಿಶ್ವದ ಜನತೆಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.ಇಂಗ್ಲೆಂಡ್ ನಲ್ಲಿ ʼಎಕ್ಸ್ಇʼ ಹೊಸ ರೂಪಾಂತರಿ ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.ಯುಕೆ (ಯುನೈಟೆಡ್ ಕಿಂಗ್ಡಮ್)ಯಲ್ಲಿ ಕೊರೊನಾ ರೂಪಾಂತರಿ ʼಎಕ್ಸ್ಇʼ ಪತ್ತೆಯಾಗಿದೆ. ಇದು ಓಮಿಕ್ರಾನ್ ಬಿಎ.1, ಬಿಎ.2ನ ಮರುಸಂಯೋಜಕವಾಗಿದೆ.ಈ ಹೊಸ ರೂಪಾಂತರಿ, ಓಮಿಕ್ರಾನ್ಗಿಂತಲೂ ವೇಗವಾಗಿ ಹರಡಬಲ್ಲದು ಎಂದು ಡಬ್ಲ್ಯೂಎಚ್ಒ ಮಾಹಿತಿ ನೀಡಿದೆ.