ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಬಗ್ಗೆ ಹೈಕಮಾಂಡ್ ಕೂಡಾ ಹೊಗಳಿದೆ.ಆದರೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದೇ ಡಿಕೆಶಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ನಿನ್ನೆ ವಿಶ್ವಾಸ ಮತ ಯಾಚನೆ ದಿನವೂ ಡಿಕೆಶಿ ಬೇಕೆಂದೇ ತಡವಾಗಿ ವಿಧಾನಸೌಧಕ್ಕೆ ಬಂದರು ಎಂಬ ಆರೋಪವಿತ್ತು. ಅಂತೂ ಡಿಕೆಶಿ ತಮ್ಮ ಪರಿಶ್ರಮಕ್ಕೆ ದೊಡ್ಡ ಪ್ರತಿಫಲವೇ ಸಿಗಬೇಕೆಂದು ಹಠ ಹಿಡಿದಿದ್ದಾರೆ ಎಂಬ ಸುದ್ದಿ ಪಕ್ಷದ