ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಮತದಾರರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಪತ್ರಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ, ದೊಡ್ಡ ದೊಡ್ಡ ಸಮಾವೇಷ ಮಾಡುವುದು ಅಷ್ಟೆ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಫರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಅನ್ನೋದೆ ಗೊತ್ತಿರುವುದಿಲ್ಲ.