ಕೇರಳ,ಅ.25 : ಅತ್ಯಂತ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ ಪ್ರಶಸ್ತಿಯನ್ನು ಕೇರಳವು ಗೆದ್ದುಕೊಂಡಿದೆ ಎಂದು ರಾಜ್ಯದ ಸಾರಿಗೆ ಸಚಿವ ಆಯಂಟನಿ ರಾಜು ಅವರು ಇಲ್ಲಿ ತಿಳಿಸಿದರು. ಅ.29ರಂದು ದಿಲ್ಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ ಸಿಂಗ್ ಪುರಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿರುವರು. ಕೊಚ್ಚಿ ನಗರದಲ್ಲಿ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಜಾರಿಗೊಳಿಸಲಾಗಿರುವ ಕೊಚ್ಚಿ ಮೆಟ್ರೊ,ವಾಟರ್ ಮೆಟ್ರೊ ಮತ್ತು ಇ-ಮೊಬಿಲಿಟಿಯಂತಹ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು