ಬೆಂಗಳೂರು : ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನ ‘ಹಂಸ-ಎನ್ಜಿ’ಯ ಸಮುದ್ರದ ಮೇಲಿನ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ವಿಮಾನ ವಿವಿಧ ಪರೀಕ್ಷೆಗಳಲ್ಲಿ ಉತ್ತಿರ್ಣವಾಗಿದ್ದು ವಾಣಿಜ್ಯ ಬಳಕೆಗೆ ಅವಕಾಶ ಪಡೆಯುವ ಅಂತಿಮ ಹಂತಕ್ಕೆ ಬಂದಿದೆ.ಪುದುಚೇರಿಯ ಕಡಲ ಮೇಲೆ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, 140 ನಾಟಿಕಲ್ ಮೈಲಿ (1 ನಾಟಿಕಲ್ ಮೈಲಿ-1.852 ಕಿ.ಮೀ.) ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ. ಈ ಹಾರಾಟದ ಸಂದರ್ಭದಲ್ಲಿ