ಮಡಿಕೇರಿ : ಕೆಲ ತಿಂಗಳ ಹಿಂದೆ ಸರಣಿ ಭೂಕಂಪನದ ಅನುಭವಾಗಿದ್ದ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ. ಭಾರಿ ಶಬ್ದದೊಂದಿಗೆ ಭೂಕಂಪನದ ಅನುಭವ ಗಡಿಭಾಗದ ಜನರಿಗೆ ಇಂದು ಸಂಜೆ 6:20ರ ಸಮಯಕ್ಕೆ ಆಗಿದೆ. ಕೊಯನಾಡಿನ ಮಂಗಳಪಾರೆ ಬಳಿ ಮತ್ತು ಸುಳ್ಯ ಭಾಗದ ಹಲವು ಗ್ರಾಮಗಳಿಗೆ ಭೂಕಂಪನವಾಗಿದೆ. ಸ್ಥಳೀಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ