ಅಂಕಾರ : ಫೆಬ್ರವರಿ 6 ರಂದು ಸಂಭವಿಸಿದ ಮಾರಣಾಂತಿಕ ಭೂಕಂಪದಿಂದಾಗಿ ಟರ್ಕಿ ಹಾಗೂ ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿದೆ.ಇದೀಗ ಸಾವಿನ ಸಂಖ್ಯೆ 41,000 ತಲುಪಿದೆ. ಅವಶೇಷಗಳಡಿಯಿಂದ ಬದುಕುಳಿದವರ ಚೀರಾಟ ಇನ್ನೂ ಕೂಡಾ ಕೇಳಿಬರುತ್ತಿದೆ. ಬದುಕುಳಿದವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿವೆ.ಮಂಗಳವಾರ ಟರ್ಕಿಯಲ್ಲಿ ಅವಶೇಷಗಳಡಿಯಿಂದ 9 ಜನ ಬದುಕುಳಿದವರನ್ನು ರಕ್ಷಿಸಲಾಗಿದೆ. ನಿರಾಶ್ರಿತರು ಈಗ ಕೊರೆಯುವ ಚಳಿಯಲ್ಲಿ ಹಾಗೂ ಆಹಾರದ ಕೊರತೆಯಿಂದಾಗಿ ಹೆಣಗಾಡುತ್ತಿದ್ದಾರೆ. ನಗರವಿಡೀ ಸತ್ತ