ಲಂಡನ್ : ಬ್ರಿಟನ್ ದೇಶವನ್ನು ಅತ್ಯಧಿಕ ಕಾಲ ಆಳಿದ ರಾಣಿ 2ನೇ ಎಲಿಜಬೆತ್ ಗುರುವಾರ ನಿಧನ ಹೊಂದಿರುವುದಕ್ಕೆ ದೇಶ ವಿದೇಶಗಳಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.ಇದೀಗ ಎಲಿಜಬೆತ್ ಹಿರಿಯ ಪುತ್ರ ವೇಲ್ಸ್ ಮಾಜಿ ಯುವರಾಜ 3ನೇ ಚಾರ್ಲ್ಸ್ ಬ್ರಿಟನ್ ದೇಶಕ್ಕೆ ನೂತನ ರಾಜರಾಗಲಿದ್ದಾರೆ.ಬ್ರಿಟನ್ನ ರಾಜ ಅಥವಾ ರಾಣಿ ಕಣ್ಮುಚ್ಚಿದ 24 ಗಂಟೆಯಲ್ಲಿ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ ಚಾರ್ಲ್ಸ್, ರಾಣಿ ಕೆಮಿಲ್ಲಾ ಪಾರ್ಕರ್ ಇಂದು ಸ್ಕಾಟ್ಲೆಂಡ್ನಿಂದ ಲಂಡನ್ ತಲುಪಿದ್ದಾರೆ.