ನವದೆಹಲಿ : ಸೆರಮ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಕೋವೊವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಅಮಿತಿ ಸೋಮವಾರ ಶಿಫಾರಸು ಮಾಡಿದೆ.ಕೋವೊವ್ಯಾಕ್ಸ್ ತುರ್ತು ಬಳಕೆಗೆ ಅವಕಾಶ ನೀಡುವಂತೆ ಸೆರಮ್ ಸಂಸ್ಥೆ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.ಲಸಿಕೆಗೆ ಬಳಸಲಾದ ಮ್ಯಾಟ್ರಿಕ್ಸ್ ಅಂಶದ ಬಗ್ಗೆ ವಿವರ ನೀಡುವಂತೆ