ಮುಂಬೈ : ಹೈದರಾಬಾದ್ನಲ್ಲಿ 2011ರಲ್ಲಿ ನಾಪತ್ತೆಯಾಗಿದ್ದ 15ವರ್ಷದ ಬಾಲಕ ಮತ್ತೆ ತನ್ನ ಮನೆಯವರನ್ನು ಮುಂಬೈನಲ್ಲಿ ಏಳು ವರ್ಷ ಬಳಿಕ ಸೇರಲು ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್ ಬುಕ್ ಕಾರಣವಾಗಿದೆ. ಸುಜೀತ್ ಕುಮಾರ್ ಝಾ (23) ಎಂಬ ಯುವಕನನ್ನು ಮುಂಬೈನಲ್ಲಿ ಪೊಲೀಸರು ಪತ್ತೆ ಮಾಡಿದ್ದು ಮಗನನ್ನು ಕಂಡು ಕುಟುಂಬದ ಸಂಭ್ರಮ ಮುಗಿಲು ಮುಟ್ಟಿದೆ. ಹೈದರಾಬಾದ್ನ ಮೌಲಾ ಅಲಿ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ 15 ವರ್ಷದ ಮಗ ನಾಪತ್ತೆಯಾದಾಗ ಆತನ ಸಹೋದರಿ ಮತ್ತು ಭಾವ