ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆ ಹರಿಸುವಂತೆ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ಬಂದಿರುವ ರೈತರು ಇಂದು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ.ಮಹದಾಯಿ ನದಿ ನೀರು ವಿವಾದ ಬಗೆ ಹರಿಸಲು ಸರ್ಕಾರ ಆಸಕ್ತಿ ತೋರಿಸಬೇಕು. ಪ್ರಧಾನಿ ಮೋದಿ ಗೋವಾ ಮತ್ತು ಕರ್ನಾಟಕ ನಡುವೆ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಬೃಹತ್ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ.ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮಾತು ತಪ್ಪಿ ನಡೆಯಬಾರದು.