ತಮಿಳುನಾಡು: ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕಲಿಯುವ ಕುರಿತು ಜಾಗೃತಿ ಮೂಡಿಸಲು ತಮಿಳುನಾಡಿನ ವಧು ಮದುವೆ ಸೀರೆಯಲ್ಲೇ ಮಾರ್ಷಲ್ ಆರ್ಟ್ಸ್ ಪ್ರದರ್ಶನ ಮಾಡಿದ್ದಾರೆ. ಮದುವೆಯ ಶಾಸ್ತ್ರಗಳು ಮುಗಿದ ನಂತರ, ಮಂಟಪದಲ್ಲಿ ಅತಿಥಿಗಳು ವಧುವರರಿಗೆ ಶುಭ ಕೋರುವುದು ಸಂಪ್ರದಾಯ. ಆದರೆ ತೂತುಕಡಿಯಲ್ಲಿ ನಡೆದ ಮದುವೆಯೊಂದರಲ್ಲಿ ಆಗಿದ್ದೇ ಬೇರೆ. ಮದುವೆ ಮುಗಿದದ್ದೇ ತಡ, ವಧು ಸೆರಗು ಸೊಂಟಕ್ಕೆ ಬಿಗಿದು, ಶಸ್ತ್ರಾಸ್ತ್ರ ಹಿಡಿದು ಮಂಟಪದಿಂದ ಕೆಳಗಿಳಿದೇ ಬಿಟ್ಟಳು! ಅಯ್ಯಯ್ಯೋ ಯಾಕೇ ಅಂತೀರಾ? ‘ಸುರಾಲು ವಾಲ್