ಭೀಕರ ಮಳೆ: ಆಂಧ್ರದಲ್ಲಿ ಅಲ್ಲೊಲ ಕಲ್ಲೊಲ…!

ಬಂಗಾಳ ಕೊಲ್ಲಿ| Ramya kosira| Last Modified ಬುಧವಾರ, 24 ನವೆಂಬರ್ 2021 (08:21 IST)ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆ ಆಂಧ್ರ ಸೇರಿ ಹಲವೆಡೆ ವರುಣ ಅಬ್ಬರಿಸಿದ್ದಾನೆ.
ಭೀಕರ ವರುಣಾಘಾತಕ್ಕೆ ಆಂಧ್ರದಲ್ಲಿ ಅಲ್ಲೊಲ ಕಲ್ಲೊಲ ಉಂಟಾಗಿದೆ. ಭಾರೀ ಮಳೆಗೆ ಜನ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಆಂಧ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಲಕಂಟಕದಿಂದ ವೆಂಕಟರಮಣನಿಗೆ 4 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಇದೀಗ ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಇದರಲ್ಲಿ ಇನ್ನಷ್ಟು ಓದಿ :