ನವದೆಹಲಿ : ದೇಶದಲ್ಲಿ ಕೋವಿಡ್ ಸೋಂಕು ಏರಿಕೆಯಾಗುತ್ತಿರುವುದರ ನಡುವೆಯೇ ಆತಂಕಕಾರಿ ಸುದ್ದಿ ಹೊರಬಿದ್ದಿದ್ದು,ಒಮಿಕ್ರೋನ್ನ ರೂಪಾಂತರಿ ಉಪತಳಿ ಎಕ್ಸ್ಇ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ. ಕೊರೋನಾ ವೈರಸ್ನ ರೂಪಾಂತರದ ಮೇಲೆ ನಿಗಾ ವಹಿಸುವ ಇನ್ಸಾಕಾಗ್ ಇದನ್ನು ಮಂಗಳವಾರ ಖಚಿತಪಡಿಸಿದೆ.ಈ ಹಿಂದೆಯೇ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಎಕ್ಸ್ಇ ಉಪತಳಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಇದೀಗ ಮೊದಲ ಬಾರಿ ಎಕ್ಸ್ಇ ಸೋಂಕು ಪತ್ತೆಯಾಗಿರುವುದನ್ನು ಇನ್ಸಾಕಾಗ್ ಅಧಿಕೃತವಾಗಿ ತಿಳಿಸಿದೆ.ಆದರೆ, ದೇಶದಲ್ಲಿ