ಐದು ದಿನಗಳ ಕಾಲ ಕೇರಳ ನಿಟ್ಟುಸಿರು

ತಿರುವನಂತರಪುರಂ| Krishnaveni K| Last Modified ಸೋಮವಾರ, 20 ಆಗಸ್ಟ್ 2018 (08:59 IST)
ತಿರುವನಂತರಪುರಂ: ಸತತ ಮಳೆಯಿಂದ ತತ್ತರಿಸಿದ್ದ ಕೇರಳಕ್ಕೆ ಐದು ದಿನಗಳ ಕಾಲ ವರುಣನಿಂದ ಮುಕ್ತಿ ಸಿಗಲಿದೆ. 12 ಜಿಲ್ಲೆಗಳಿಗೆ ನೀಡಲಾಗಿದ್ದ ರೆಡ್ ಅಲರ್ಟ್ ಹಿಂಪಡೆಯಲಾಗಿದೆ.

ಚೆಂಗನ್ನೂರು, ಪಟ್ಟಣಂತಿಟ್ಟ, ಆಲುವಾ, ಅಡೂರು ಹೊರತುಪಡಿಸಿ ಉಳಿದ ಕಡೆ ಮಳೆ ಕ್ರಮೇಣ ಕಡಿಮೆಯಾಗುತ್ತಿದ್ದು, ರೆಡ್ ಅಲರ್ಟ್ ಹಿಂಪಡೆಯಲಾಗಿದೆ. ಮುಂದಿನ ಐದು ದಿನಗಳ ಕಾಲ ಮಳೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.


ಹಾಗಿದ್ದರೂ ಕಲ್ಲಿಕೋಟೆ, ಕಣ್ಣೂರು, ಇಡುಕ್ಕಿ ಜಿಲ್ಲೆಗಳಲ್ಲಿ ಇನ್ನೂ ಭಾರೀ ಮಳೆ ಸುರಿಯುವ ಅಪಾಯವಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :