ಬೆಂಗಳೂರು : ದಸರಾ ರಜೆ ಮುಗಿದ ನಂತರ ಒಂದರಿಂದ ಐದನೇ ತರಗತಿ ಶಾಲೆ ಆರಂಭಿಸಲಾಗುವುದು. ಅಕ್ಟೋಬರ್ 20 ಕ್ಕೆ ದಸರಾ ರಜೆ ಮುಕ್ತಾಯವಾಗಲಿದೆ. ಅಕ್ಟೋಬರ್ 21 ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್ 10 ರಿಂದ ಮಧ್ಯಂತರ ಅಥವಾ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್ 20 ಕ್ಕೆ ಮುಕ್ತಾಯವಾಗಲಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಹೀಗಾಗಿ ಶಿಕ್ಷಣ ತಜ್ಞರು, ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು,