ಬೆಂಗಳೂರು : ಆಗಸ್ಟ್ 15ರ ನಂತರ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಲಾಗಿದೆ. ಯಾರಾದರು ಫ್ಲೆಕ್ಸ್, ಬ್ಯಾನರ್ ಹಾಕಿದರೆ 50,000 ರೂ. ದಂಡ ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರಗಡೆ ನೋಡಿದಾಗ ನನಗೆ ಅಸಹ್ಯ ಎನ್ನಿಸಿದೆ. ಬ್ಯಾನರ್, ಫ್ಲೆಕ್ಸ್ ಯಾರದೇ ಆಗಲಿ ಸಂಪೂರ್ಣ ಬ್ಯಾನ್. ಯಾರು ಕೂಡ ಹಾಕಬಾರದು. ಯಾರದಾದರು ಹೆಸರಲ್ಲಿ ಹಾಕಿದರೆ ಅವರಿಗೂ 50 ಸಾವಿರ ದಂಡ ಹಾಕುತ್ತೇವೆ. ಇನ್ಮೇಲೆ