ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ. ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ ಎಸ್ಎಂಎಸ್, ಇಮೇಲ್ ಇತ್ಯಾದಿಗಳ ಮೂಲಕ ಸಂಪರ್ಕ ಸಾಧಿಸಿ ಗ್ರಾಹಕರ ವೈಯಕ್ತಿಕ ವಿವರಗಳು, ಖಾತೆ, ಲಾಗಿನ್ ವಿವರಗಳು, ಕಾರ್ಡ್ ವಿವರಗಳು, ಪಿನ್, ಓಟಿಪಿ, ಇತ್ಯಾದಿಗಳನ್ನು ಹಂಚಿಕೊಳ್ಳಲು ಕೋರುವುದು ಅಥವಾ ಅನಾಮಿಕ ಲಿಂಕ್ ಒಂದರ ಮೂಲಕ ಕೆವೈಸಿ ಮಾಡಲು ವಂಚಕರು ಕೋರುತ್ತಾರೆ ಎಂದು