ಬೆಂಗಳೂರು : ಮಹಿಳೆಯರಿಗೂ ಉಚಿತ ಸರ್ಕಾರಿ ಬಸ್ ಪ್ರಯಾಣ ಬಗ್ಗೆ ಇಂದು ಸರ್ಕಾರ ಆದೇಶ ನೀಡುವ ಸಾಧ್ಯತೆ ಇದೆ. ಗೃಹ ಲಕ್ಷ್ಮಿ ಯೋಜನೆಗೂ ಇಂದು ಸರ್ಕಾರಿ ಆದೇಶ ನೀಡಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ. ಮಿನಿಮಮ್ ಕಂಡೀಷನ್ಸ್ ಮ್ಯಾಕ್ಸಿಮಮ್ ಬೆನಿಫಿಟ್ ಆಧಾರದಲ್ಲಿ ಆದೇಶಗಳ ಪ್ರಕಟವಾಗಲಿದ್ದು, ಆದೇಶಗಳ ಪ್ರಕಟಕ್ಕೆ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.