ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗಡ್ಕರಿ ಚಾಲನೆ!

ಹೊಸದಿಲ್ಲಿ| Ramya kosira| Last Modified ಬುಧವಾರ, 24 ನವೆಂಬರ್ 2021 (16:10 IST)
25 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದಾರೆ.
ಸುಮಾರು 257 ಕಿಲೋ ಮೀಟರ್ ಉದ್ದ ಬೃಹತ್ ರಾಷ್ಟ್ರೀಯ ಹೆದ್ದಾರಿ ಯೋಜನೆ ಇದಾಗಿದ್ದು, ಜಮ್ಮುವಿನಲ್ಲಿ ಈ ಪ್ರೋಜೆಕ್ಟ್ಗೆ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಶಂಕುಸ್ಥಾಪನೆ ಮಾಡಲಿದ್ದಾರೆ. ಇನ್ನು 11 ಸಾವಿರದ 721 ಕೋಟಿ ರೂಪಾಯಿಯ ಯೋಜನೆ ಇದಾಗಿದ್ದು, ಈ ಹೆದ್ದಾರಿ ಜಮ್ಮು-ಕಾಶ್ಮೀರದ ಕಣಿವೆಯ ಪ್ರದೇಶದಲ್ಲೂ ಸಂಪರ್ಕ ಕಲ್ಪಿಸಲಿದೆ. ಇನ್ನು ಯೋಜನೆಯಿಂದ ವಿವಿಧ ಜಿಲ್ಲೆಗಳಿಗೂ ಸಂಪರ್ಕ ಕಲ್ಪಿಸಲಿದ್ದು, ಕೃಷಿ ಸೇರಿದಂತೆ ಸ್ವ-ಉದ್ಯೋಗಕ್ಕೆ ಉಪಯೋಗವಾಗಲಿದೆ ಅಂತಾ ನಿತೀನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :