ಬೆಂಗಳೂರು : ನುಗ್ಗೆಕಾಯಿ ತಿನ್ನಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ, ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರರೆಗೂ ನುಗ್ಗೆಕಾಯಿ ಎಂದ್ರೆ ಪಂಚಪ್ರಾಣ. ಆದರೆ ಇದರ ಬೆಲೆ ಕೆಜಿಗೆ 300 ರೂ. ಜಿಗಿತ ಕಂಡಿರುವ ಪರಿಣಾಮ ನುಗ್ಗೆಕಾಯಿ ತಿನ್ನಬೇಕು ಎಂಬುವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, ನುಗ್ಗೆಕಾಯಿ ಖರೀದಿಸಲು ನೂರೆಂಟು ಬಾರಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ನುಗ್ಗೆಕಾಯಿ ಸೇವಿಸುವುದು ಬಿಡಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ. ಬಹುತೇಕರು ಮನೆಯಲ್ಲಿ ಬೇಳೆ