ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ ಆಗಿರೋದು ಒಂದರ ಹಿಂದೆ ಒಂದರಂತೆ ಬಹಿರಂಗ ವಾಗುತ್ತಿದೆ.ಪಿಎಸ್ಐ, ಕಾನ್ಸಟೇಬಲ್, ಕೆಪಿಎಸ್ಸಿ ಜೊತೆ ಲೋಕೋಪಯೋಗಿ ಇಲಾಖೆ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಆಗಿದೆ. 2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಎಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಉತ್ತರ ಬರೆಯಲಾಗಿದೆ.ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರದ ಸಮೀಪದ ಹೊಟೇಲ್ವೊಂದರಲ್ಲಿ ಕುಳಿತು ಬ್ಲೂಟೂತ್ ಡಿವೈಸ್ ಮೂಲಕ ಸರಿ ಉತ್ತರ