ನವದೆಹಲಿ : 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ 500 ಮದ್ಯದಂಗಡಿಗಳು ಹಾಗೂ 2022ರ ವರ್ಷಾಂತ್ಯದ ವೇಳೆಗೆ ಇನ್ನೂ 200 ಅಂಗಡಿಗಳು ಸೇರಿ 700 ಮದ್ಯದಂಗಡಿಗಳು ತಲೆ ಎತ್ತಲಿವೆ ಎಂದು ದೆಹಲಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇದರ ಭಾಗವಾಗಿ