ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಗುಡ್ನ್ಯೂಸ್!

ಲಂಡನ್| Ramya kosira| Last Modified ಮಂಗಳವಾರ, 20 ಜುಲೈ 2021 (15:22 IST)
ಲಂಡನ್(ಜು.20): ಕೊರೋನಾ ಸೋಂಕಿನಿಂದ ಗುಣಮುಖರಾದ 9 ತಿಂಗಳ ತನಕ ದೇಹದಲ್ಲಿ ಪ್ರತಿಕಾಯ ಶಕ್ತಿ ಅಧಿಕವಾಗಿರುತ್ತದೆ ಎಂಬ ಸಂಗತಿ ಇಟಲಿಯಲ್ಲಿ ನಡೆಸಲಾದ ಅಧ್ಯಯನವೊಂದರಿಂದ ತಿಳಿದುಬಂದಿದೆ.


* ಕೊರೋನಾ ಸೋಂಕಿತರಲ್ಲಿ 9 ತಿಂಗಳ ತನಕ ಪ್ರತಿಕಾಯ ಶಕ್ತಿ ಇರಲಿದೆ: ಅಧ್ಯಯನ
* ಇಟಲಿಯಲ್ಲಿ ನಡೆಸಲಾದ ಅಧ್ಯಯನದಲ್ಲಿ ಮಾಹಿತಿ
* ಕೊರೋನಾದಿಂದ ಗುಣಮುಖರಾದವರ ಪೈಕಿ ಶೇ.98ರಷ್ಟುಜನರಲ್ಲಿ ಗುರುತಿಸಬಹುದಾದಷ್ಟುಪ್ರತಿಕಾಯ ಶಕ್ತಿ ಉತ್ಪತ್ತಿ
 
ಪಡುವಾ ವಿಶ್ವವಿದ್ಯಾಲಯ ಹಾಗೂ ಇಂಪೀರಿಯಲ್ ಕಾಲೇಜ್ ಲಂಡನ್ನ ಸಂಶೋಧಕರು ಇಟಲಿಯ ವೊ ಎಂಬ ಪ್ರಾಂತ್ಯದಲ್ಲಿ ಕಳೆದ ವರ್ಷ ಫೆಬ್ರವರಿ ಮತ್ತು ಮಾಚ್ರ್ನಲ್ಲಿ ಕೊರೋನಾ ಸೋಂಕಿತರಾದವರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಅವರನ್ನು ಮೇ ಮತ್ತು ನವೆಂಬರ್ನಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಫೆಬ್ರವರಿ ಮತ್ತು ಮಾಚ್ರ್ನಲ್ಲಿ ಕೊರೋನಾದಿಂದ ಗುಣಮುಖರಾದವರ ಪೈಕಿ ಶೇ.98ರಷ್ಟುಜನರಲ್ಲಿ ಗುರುತಿಸಬಹುದಾದಷ್ಟು ಪ್ರತಿಕಾಯ ಶಕ್ತಿ ಉತ್ಪತ್ತಿ ಇದ್ದಿದ್ದು ಕಂಡುಬಂದಿತ್ತು.
ಆದರೆ, ಮೇ ಮತ್ತು ನವೆಂಬರ್ ವೇಳೆಗೆ ಅವರಲ್ಲಿ ಪ್ರತಿಕಾಯ ಶಕ್ತಿ ಕುಂದಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಇದೇ ವೇಳೆ ಕೊರೋನಾದ ಲಕ್ಷಣ ಹೊಂದಿದ್ದವರು ಮತ್ತು ಲಕ್ಷಣ ರಹಿತರಲ್ಲಿಯೂ ಒಂದೇ ರೀತಿಯ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬುದನ್ನು ಫಲಿತಾಂಶಗಳು ತೋರಿಸಿವೆ
 
ಇದರಲ್ಲಿ ಇನ್ನಷ್ಟು ಓದಿ :